ರಾಷ್ಟ್ರೀಯ ಮಾನವ ಹಕ್ಕು ಸಂಸ್ಥೆಗಳ ಒಕ್ಕೂಟ ಭಾರತದಲ್ಲಿನ ಮಾನವ ಹಕ್ಕುಗಳಿಗೆ ಶ್ರಮಿಸುವ ವ್ಯಕ್ತಿ/ಸಂಸ್ಥೆ ಗಳು ಕೂಡಿದ ಒಂದು ಸಾಮಾನ್ಯ ವೇದಿಕೆಯಾಗಿದೆ. ಈ ಒಕ್ಕೂಟವು ಅಮೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾ ಸಂಸ್ಥೆಯ ಸಹಯೋಗದೊಂದಿಗೆ ಒಂದು ರಾಷ್ಟ್ರ ಮಟ್ಟದ ವಿಚಾರ ಕಮ್ಮಟವನ್ನು ೨೬ರ ಜೂನ್ ೨೦೦೭ ರಂದು ಹಮ್ಮಿಕೊಂಡಿತ್ತು. ಮುಂಬೈನ ಮರಾಠಿ ಪತ್ರಕಾರರ ಸಂಘದ ಹಾಲ್ ನಲ್ಲಿ ನಡೆದ ಈ ವಿಚಾರ ಕಮ್ಮಟದಲ್ಲಿ 'ನಕಲಿ ಎನ್ಕೌಂಟರ್ ಹತ್ಯೆಗಳು' ಚರ್ಚೆಯ ವಿಷಯವಾಗಿತ್ತು. == ಆಕರಗಳು == ರಾಷ್ಟ್ರೀಯ ಮಾನವ ಹಕ್ಕು ಸಂಸ್ಥೆಗಳ ಒಕ್ಕೂಟದ ಅಧೀಕೃತ ವೆಬ್ಸೈಟ್. ೨೦೧೮ರ ಏಪ್ರಿಲ್ ತಿಂಗಳಿನಲ್ಲಿ ನಡೆದ ಭಾರತ್ ಬಂದ್ ವೇಳೆ ಹಲವಾರು ಜನರ ಮೇಲೆ ಪೊಲೀಸ್ ಹಲ್ಲೆಯಾಗಿದ್ದನ್ನು ಖಂಡಿಸಿ ಬಿಡುಗಡೆಯಾದ ಒಕ್ಕೂಟದ ಹೇಳಿಕೆ. ಜಾರ್ಖಂಡ್ ರಾಜ್ಯದಲ್ಲಿನ ಜನಾಂದೋಲನವನ್ನು ಹತ್ತಿಕ್ಕುವ ಉದ್ದೇಶದಿಂದ ಜನರ ಮೇಲಿನ ದಾಳಿ ಕುರಿತು ಸತ್ಯ ವಿಶ್ಲೇಷಣೆಯ ವರದಿ. ಭಾರತದಲ್ಲಿನ ಎನ್ಕೌಂಟರ್ ಹತ್ಯೆಗಳ ಕುರಿತಾದ ದಿ ಹಿಂದೂ ದೈನಿಕದ ಆಂಗ್ಲ ವರದಿ. ಉಡುಪಿಯಲ್ಲಿ ಜಿಲ್ಲಾ ಸಮಿತಿ ತೆರೆದ ರಾಷ್ಟ್ರೀಯ ಮಾನವ ಹಕ್ಕು ಸಂಸ್ಥೆಗಳ ಒಕ್ಕೂಟ ದಿ ಹಿಂದೂ ದೈನಿಕದ ಆಂಗ್ಲ ವರದಿ.